Amrutha | Self Help Group

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಅಮೃತೇಶ್ವರನಹಳ್ಳಿ ಗ್ರಾಮದಲ್ಲಿ ದಿನಾಂಕ ೨೭-೦೫-೨೦೧೬ ರ ಶುಕ್ರವಾರದಂದು ಸರಳವಾದ ಕಾರ್ಯಕ್ರಮದಲ್ಲಿ ಅತ್ಯದ್ಭುತವಾಗಿ ಸಂಭ್ರಮವಾಗಿ ;ಅಮೃತ ಸ್ವ-ಸಹಾಯ ಸಂಘ (ರಿ) ನೋಂದಣಿ ಸಹಿತ ಪ್ರಾರಂಭವಾಯಿತು।

ಈ ಸಂಘವು ಸ್ಥಾಪನೆಗೊಳ್ಳಲು ಮೂಲ ಕಾರಣ ನಮ್ಮ ಹಳ್ಳಿಯಲ್ಲಿರುವ ಸಹೃದಯದ ಗೆಳೆಯರು ಸಮಾಜ ಸೇವೆಯ ಹಂಬಲದ ಚಿರ ಯುವಕರು ಗ್ರಾಮಾಭಿವೃದ್ಧಿಯ ಚಿಂತಕರು, ಗ್ರಾಮದ ಶೈಕ್ಷಣಿಕ ಅಭಿವೃದ್ಧಿಗೊಳಿಸಬೇಕೆಂಬ ಆಶಾದಾಯಕ ಶಿಕ್ಷಣ ಶಿರೋಮಣಿಗಳ ಹಂಬಲದೊಂದಿಗೆ ಶ್ರೀಯುತ ಸನ್ಮಾನ್ಯ ಶ್ರೀ ಎ. ದೊಡ್ಡಿರೇಗೌಡ ಎನ್। ಇವರ ಮಾರ್ಗದರ್ಶನದಲ್ಲಿ ದಿನಾಂಕ ೧೦-೦೪-೨೦೧೬ ಭಾನುವಾರದಂದು ಚರ್ಚಿಸಿ ಸಂಘವನ್ನು ಸ್ಥಾಪಿಸಲು ಮತ್ತು ಸದಸ್ಯರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.

ನಂತರ ಸದಸ್ಯರುಗಳೆಲ್ಲರೂ ಆಯ್ಕೆಯಾಗಿ ಶ್ರೀಯುತ ಸನ್ಮಾನ್ಯ ಶ್ರೀ ಮಧು ಡಿ ರವರನ್ನು ಅಧ್ಯಕ್ಷರಾಗಿಯೂ, ಶ್ರೀಯುತ ಸನ್ಮಾನ್ಯ ಶ್ರೀ ರವಿ ಯವರನ್ನು ಕಾರ್ಯದರ್ಶಿಯಾಗಿ ಮತ್ತು ಶ್ರೀಯುತ ಶ್ರೀ ಮಂಜುನಾಥ ಎ. ಸಿ. ರವರನ್ನು ಖಜಾಂಚಿಯಾಗಿ ಆಯ್ಕೆಮಾಡಿ ಅಧಿಕಾರ ನೀಡಲಾಯಿತು। ಸಂಘದ ಪ್ರಾರಂಭದ ಮೊದಲ ತಿಂಗಳಿನಲ್ಲಿ ಸದಸ್ಯರೆಲ್ಲರೂ ೫೦೦೦ ಐದು ಸಾವಿರ ರೂಗಳನ್ನು ಕಟ್ಟಲಾಯಿತು ನಂತರ ಪ್ರತಿ ತಿಂಗಳು ಒಂದು ಸಾವಿರ ರೂಗಳನ್ನು ಪಾವತಿಸಬೇಕೆಂದು ತೀರ್ಮಾನಿಸಲಾಯಿತು ।

ಪ್ರತಿ ತಿಂಗಳು ಕ್ರೂಡೀಕರಿಸಿದ ಹಣವನ್ನು ನಮ್ಮ ಸಂಘದಲ್ಲೇ ಇರುವ ಸದಸ್ಯರಿಗೆ ಅಗತ್ಯವಿರುವಷ್ಟು ಹಣವನ್ನು ನೀಡಿ ಕಂತುಗಳ ರೂಪದಲ್ಲಿ ಪಾವತಿಸಬೇಕೆಂದು ತಿಳಿಸಿ ಶೇಕಡಾ ಒಂದು ರೂಗಳ ಬಡ್ಡಿ ದರದಲ್ಲಿ ನೀಡುತ್ತಿದ್ದೇವೆ ।

ಇದರ ಉದ್ದೇಶ ಸಂಘದ ಸದಸ್ಯರುಗಳಿಗೆ ಆರ್ಥಿಕವಾಗಿ ಸಹಕಾರಿಯಾಗುವುದು ಮತ್ತು ಸದಸ್ಯ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲವಾಗಿ ಅವರನ್ನು ಸಧೃಡಗೊಳಿಸುವುದು ಮತ್ತು ಸದಸ್ಯರೆಲ್ಲರ ಕುಟುಂಬವು ಒಂದೇ , ಸರ್ವರೂ ಸಧೃಡಗೊಳ್ಳುವುದು ಹಾಗು ನಮ್ಮ ಹಳ್ಳಿಯ ಸಂಸ್ಕಾರದ ಜೊತೆ ಭಾವನಾತ್ಮಕ ಸಂಭಂದಗಳನ್ನು ಉಳಿಸಿ ಬೆಳೆಸಿಕೊಂಡು ನಾವುಗಳ ಜೊತೆ ನಮ್ಮವರು ಬದುಕುವುದು ।

ಅಮೃತ ಚಾರಿಟಬಲ್ ಟ್ರಸ್ಟ್ (ರೀ) ದಿನಾಂಕ ೧೪-೦೩-೨೦೧೮ ರಂದು ಸನ್ಮಾನ್ಯ ಶ್ರೀ ಶ್ರೀ ಶ್ರೀ ಕಂಠ ಸಿದ್ಧಲಿಂಗರಾಜೇ ಅರಸು (ಪೀಠಾಧಿಪತಿಗಳು ಆದಿ ಹೊನ್ನಾಯಕನಹಳ್ಳಿ ಶ್ರೀ ಮಂಟೇಸ್ವಾಮಿ ಮಠ ಮಳವಳ್ಳಿ ಶ್ರೀ ಮಂಟೇಸ್ವಾಮಿ ಮಠ , ಕಪ್ಪಾಡಿ ಶ್ರೀ ಕ್ಷೇತ್ರ ) ರವರು ಉದ್ಘಾಟಿಸಿದರು

ಬೆಂಗಳೂರಿನ ಜಯನಗರದ ಶ್ರೀ ವಿಜಯಾ ಯೋಗಾನಂದ ಗುರೂಜಿರವರು ಅಧ್ಯಕ್ಷತೆ ವಹಿಸಿದರು। ಮುಖ್ಯ ಅಥಿತಿಗಳಾಗಿ ಮೈಸೂರಿನ ಸಿಂಡಿಕೇಟ್ ಬ್ಯಾಂಕಿನ ಉಖ್ಯ ಪ್ರಬಂಧಕರಾದ ಎಚ್ ಎಸ್ ಕೃಷ್ಣಮೂರ್ತಿ ಅವರು ಆಗಮಿಸಿದ್ದರು । ಅಮೃತ ಚಾರಿಟಬಲ್ ಟ್ರಸ್ಟ್ (ರೀ) ನ ಅಧ್ಯಕ್ಷರಾಗಿ ಶ್ರೀ ರಾಜಶೇಖರ್। ಸಿ। ರವರು ಕಾರ್ಯದರ್ಶಿಯಾಗಿ ಶ್ರೀ ರವಿ ಯವರು ಉಪಾಧ್ಯಕ್ಷರಾಗಿ ಶ್ರೀ ನಾಗೇಂದ್ರ ಈ ಜೆ ರವರು ಖಜಾಂಚಿಯಾಗಿ ಶ್ರೀ ಮಂಜು ಈ ಎ ಎನ್ ರವರು ಅತ್ತು ಹನ್ನೊಂದು ನಿರ್ದೇಶಕರನ್ನೊಳಗೊಂಡ ಟ್ರಸ್ಟ್ ಪ್ರಾರಂಭವಾಗುತ್ತದೆ ।

ಅಮೃತ ಚಾರಿಟಬಲ್ ಟ್ರಸ್ಫ್ಟ್ (ರೀ) ಹೊಸ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಅಮ್ಮ ಗ್ರಾಮದ ಅರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆ ಯನ್ನು ದತ್ತು ಸ್ವೀಕಾರ ಮಾಡುವ ಬಗ್ಗೆ ಚರ್ಚಿಸಲಾಗುತ್ತದೆ। ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ದತ್ತು ಸ್ವೀಕಾರದ ಬದಲು ಮಕ್ಕಳ ಮನೆ ಪ್ರಾರಂಭಿಸಲು ಮಾಡಿಕೊಡುತ್ತಾರೆ ।

ನಂತರ ನಮ್ಮ ಅಮೃತ ಚಾರಿಟಬಲ್ ಟ್ರಸ್ಟ್ (ರೀ) । ಅಹಯೋಗದೊಂದಿಗೆ ಶಾಲೆಯನ್ನು ಮಕ್ಕಳ ಮನೆ ತೆರೆಯಲಾಗುತ್ತದೆ। ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ಯನ್ನು ಪ್ರಾರಂಭಿಸಿ ಟ್ರಸ್ಟ್ ನ್ ವತಿಯಿಂದ ಶಾಲೆಗೇ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಅವರ ಅಂಬಲ ಇತರೆ ಭತ್ಯೆಯನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತದೆ । ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ , ಪೆನ್ಸಿಲ್ , ಶೂ , ಶಾಲಾ ಸಮವಸ್ತ್ರ ಇಥ್ಯಾದಿಗಳನ್ನು ಉಚಿತವಾಗಿ ನೀಡಿ ಉಚಿತ ಶಿಕ್ಷಣ ನೀಡಲಾಗುತಿದೆ। ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮವನ್ನು ಟ್ರಸ್ಟ್ ನಡೆಸಿಕೊಂಡು ಬರುತ್ತಿದೆ। ಮಕ್ಕಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ।

ನಮ್ಮ ಗ್ರಾಮಕ್ಕೆ ಸೀಮಿತವಾಗದೆ ಅಕ್ಕ ಪಕ್ಕದ ಗ್ರಾಮದ ಶಾಲೆಗಳಿಗೂ ಉಚಿತ ನೋಟ್ ಬುಕ್ ನೀಡಲಾಗುತ್ತಿದೆ । ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಅಮೃತ ಚಾರಿಟೇಬಲ್ ಟ್ರಸ್ಟ್ (ರೀ) ಗೆ ಅಮೃತ ಸ್ವ -ಸಹಾಯ ಸಂಘ (ರೀ)ವು ಬೆನ್ನೆಲುಬಾಗಿ ನಿಂತಿದೆ। ನಮ್ಮ ಅಂಘದ ಆಡಳಿತವನ್ನು ಗ್ರಾಮದಲ್ಲಿ ಅಷ್ಟೇ ಅಲ್ಲದೆ ತಾಲ್ಲೂಕಿನ ಮಟ್ಟದ ವರೆಗೂ ಸರ್ವರೂ ಶಲಾಘಿಸಿದ್ಧಾರೆ।

ಸಂಘದ ಕಾರ್ಯ ವೈಖರಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕೆಂದು ನಮ್ಮ ಅಂಘದ ದೂರಾಲೋಚನೆಯೊಂದಿಗೆ ನಮ್ಮ ಗ್ರಾಮದಲ್ಲೇ ಇರುವಂತ ಮಹಿಳಾ-ಸ್ವ- ಸಹಾಯ ಸಂಘಗಳಿಗೆ ಸಾಲವನ್ನು ನೀಡಿ ಶೇ ೧ ರೂ ನಂತೆ ಪ್ರತಿ ತಿಂಗಳು ಅಸಲು ಅತ್ತು ಬಡ್ಡಿಯನ್ನು ಕಂತುಗಳ ರೂಪದಲ್ಲಿ ಕಟ್ಟಿಸಿಕೊಂಡು ಸಂಘದ ಆರ್ಥಿಕ ವ್ಯವಹಾರವನ್ನು ಹಿಮ್ಮುಡಿಗೊಳಿಸಿ ನಂತರ ಸಹಕಾರ ಕ್ಷೇತ್ರಗಳತ್ತ ತನ್ನ ಬಾಹುಗಳನ್ನು ಚಾಚುವತ್ತ ಸಾಗಿದೆ।

Amrutha Self Help Group Members

We have 20 Members and 2 Self Help Groups associated with us

Olivia Young

Teacher

Daniel Anderson

Professor

David Brook

Teacher

Brigeth Smith

Teacher

Subscribe Newsletter

Subscribe our newsletter and get latest update